ಯೋಗ ಅಭ್ಯಾಸ ಮಾಡುವ ಮೊದಲು, ಯೋಗ ಮಂತ್ರವನ್ನು ಪಠಿಸಿ, ಇದು ನಿಮ್ಮ ದೇಹ ಮತ್ತು ಪರಿಸರವನ್ನು ಶಾಂತಗೊಳಿಸುತ್ತದೆ .ಯೋಗ ಮಂತ್ರವು ಉತ್ತಮ ಫಲಿತಾಂಶವನ್ನು ತರಲು ಸಹಾಯ ಮಾಡುತ್ತದೆ.ನಾವು ಮಾಡುವ ಯಾವುದೇ ಕೆಲಸ ಅದರ ವಿಶೇಷತೆ ತಿಳಿದುಕೊಳ್ಳುವುದು ತುಂಬಾ ಮುಖ್ಯ, ಯೋಗ ಮಂತ್ರ ಮತ್ತು ಅದರ ಅರ್ಥ ತಿಳಿದುಕೊಳ್ಳಲು ತುಂಬಾ ಮುಖ್ಯ.

ಯೋಗ ಮಂತ್ರ ಮತ್ತು ಅದರ ಅರ್ಥ

ಮೊದಲು ಓಂಕಾರವನ್ನು ಮೂರು ಬಾರಿ ಉಚ್ಚರಿಸುವುದು.

ಶಾಂತಿ ಮಂತ್ರ

ಓಂ ಸಹನಾವವತು  | 

ಸಹನೌಭುನಕ್ತು  |

ಸಹವೀರ್ಯಂ ಕರವಾವಹ್ಯೆ 

ತೆಜಸ್ವಿನಾ ವಧೀತಮಸ್ತು | 

ಮಾ ವಿದ್ವಿಷಾವಹ್ಯೆಃ ||

ಓಂ ಶಾಂತಿಃ ಶಾಂತಿಃ ಶಾಂತಿಃ

ಅರ್ಥ :- ಪರಬ್ರಹ್ಮವು ನಮ್ಮೆಲ್ಲರನ್ನು ಜೊತೆಯಲ್ಲಿ ರಕ್ಷಿಸಲಿ. ನಮ್ಮೆಲ್ಲರನ್ನು ಜೊತೆಯಲ್ಲಿ ಪೋಷಿಸಲಿ, ಜೊತೆಯಲ್ಲಿಯೇ ನಾವು ಸಮರ್ಥವಾದ ಕಾರ್ಯವನ್ನು ಮಾಡುವಂತಾಗಲಿ, ನಮ್ಮೆಲ್ಲರ ಅಧ್ಯಯನವು ತೇಜಸ್ವಿಯಾಗಲಿ, ನಾವು ದ್ವೇಷಿಸದೇ ಇರುವಂತಾಗಲಿ, ನಮ್ಮಲ್ಲಿಯೂ, ಪರಿಸರದಲ್ಲಿಯೂ, ನಮ್ಮ ಮೇಲೆ ಪ್ರಭಾವ ಬೀರುವ ದೈವಶಕ್ತಿಗಳಲ್ಲಿಯೂ ಶಾಂತಿ ವ್ಯಾಪಿಸಲಿ.

ಗುರುಸ್ತುತಿ

ಗುರುಬ್ರಹ್ಮ ಗುರುವಿಷ್ಣುಃ |

ಗುರುದೇವೋ ಮಹೇಶ್ವರಃ ||

ಗುರುಸಾಕ್ಷಾತ್ ಪರಬ್ರಹ್ಮ |

ತಸ್ಮೈ ಶ್ರೀ ಗುರುವೇ ನಮಃ ||

ಅರ್ಥ :- ಗುರುವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಾಗಿದ್ದಾನೆ. ಸಾಕ್ಷಾತ್‌ ಪರಬ್ರಹ್ಮ ವಸ್ತುವೂ ಗುರುವೇ ಆದ್ದರಿಂದ ಇಂತಹ ಗುರುವಿಗೆ ನಮನಗಳು.

ಸೂರ್ಯನಮಸ್ಕಾರ ಮಂತ್ರ

ಓಂ ಹಿರಣ್ಯಯೇನ ಪಾತ್ರೇಣ |

ಸತ್ಯಾಸ್ಯಾಪಿ ಹಿತಂ ಮುಖಂ |

ತತ್ವಂ ಪೂಷನ್ನ ಪಾವೃಣು |

ಸತ್ಯಧರ್ಮಾಯ ದೃಷ್ಟಯೇ ||

ಧ್ಯೇಯಃ ಸದಾ ಸವಿತ್ರಮಂಡಲ ಮಧ್ಯವರ್ತಿ |

ನಾರಾಯಣ ಸರಸಿಜಾಸನ ಸನ್ನಿವಿಷ್ಟಃ ||

ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟಿ ಹಾರಿಹಿರಣ್ಮಯ ವಪುಃದೃತ ಶಂಕಚಕ್ರಃ ||

ಅರ್ಥ :- ಸತ್ಯದ ಮುಖವನ್ನು ಚಿನ್ನದ ತಟ್ಟೆಯಂತಿರುವ ನಿನ್ನ ಬಿಂಬದಿಂದ ಮುಚ್ಚಿರುವ ಸೂರ್ಯಭಗವಂತನೇ, ಸತ್ಯ ಧರ್ಮ ಪರಾಯಣನಾದ ನನ್ನ ಕಣ್ಣಿಗೆ ನಿನ್ನ ಚಿನ್ನದ ಮುಖವಾಡವನ್ನು ತೆಗೆದು ಸತ್ಯ ಸ್ವರೂಪವು ಗೋಚರವಾಗುವಂತೆ ಮಾಡು.

ಸೂರ್ಯ ಮಂಡಲದ ಮಧ್ಯದಲ್ಲಿ ಶೋಭಿಸುವ ನಾರಾಯಣನನ್ನು ಯಾವಾಗಲೂ ಧ್ಯಾನಿಸಬೇಕು. ಅವನು ತಾವರೆಯ ಮೇಲೆ ಕುಳಿತಿದ್ದು ಮಕರದಂತಿರುವ ಕರ್ಣಾಭರಣ, ಕಿರೀಟ, ಹಾರ ಮತ್ತು ಭುಜಗಳಲ್ಲಿ ಶಂಖ, ಚಕ್ರಗಳನ್ನು ಧರಿಸಿ ಬಂಗಾರದಂತೆ ಮೈಕಾಂತಿಯಿಂದ ವಿರಾಜಿಸುತ್ತಿದ್ದಾನೆ.

ಭೂ ನಮನ ಮಂತ್ರ

ಸಮುದ್ರವಸನೇ ದೇವಿ |

ಪರ್ವತಸ್ಯ ನಮಂಡಲೇ |

ವಿಷ್ಣು ಪತ್ನೀಂ ನಮಸ್ತುಭ್ಯಂ |

ಪಾದಸ್ಪರ್ಶಂ ಕ್ಷಮಸ್ವಮೇ ||

ಅರ್ಥ :- ಮಹವಿಷ್ಣುವಿನ ಪತ್ನಿಯಾದ ಭೂದೇವಿಯೇ ! ಸಮುದ್ರವೇ ನಿನಗೆ ಉಡುವ ಬಟ್ಟೆಗಳು. ಕುಲಪರ್ವತಗಳೇ ನಿನ್ನ ಸ್ತನಗಳು. ನಿನಗೆ ನಮಸ್ಕಾರ. ನನ್ನ ಪಾದಸ್ಪರ್ಶದಿಂದಾದ ಅಪರಾಧವನ್ನು ಮನ್ನಿಸು

ಯೋಗ ಮಂತ್ರ

ಯೋಗೇನ ಚಿತ್ತಸ್ಯ ಪದೇನ ವಾಚಂ |

ಮಲಂ ಶರೀರಸ್ಯ ಚ ವ್ಯೆದ್ಯಕೇನ

ಯೋಪಾಕರೋತ್ತಂ ಪ್ರವರಂ ಮುನೀನಾಂ |

ಪತಂಜಲಿಂ ಪ್ರಾಂಜಲಿರಾನ ತೋಸ್ಮಿನ್‌

ಆಬಾಹು ಪುರುಷಾಕಾರಂ |

ಶಂಕ ಚಕ್ರಾಸಿಧಾರಿಣಿಂ |

ಸಹಸ್ರ ಶಿರಸಂ ಶ್ವೇತಂ |

ಪ್ರಣಮಾಮಿ ಪತಂಜಲಿಂ ||

ಮನಸ್ಸಿನ (ಅಂತರಂಗದ) ದೋಷಗಳು ಯೋಗದರ್ಶನದಿಂದಲೂ, ಸಂಭಾಷಣೆ ಮತ್ತು ಬರಹದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕವೂ ಶರೀರದ ದೋಷಗಳನ್ನು ವೈದ್ಯಶಾಸ್ತ್ರದಿಂದ ಮೂಲಕವೂ ದೂರಗೊಳಿಸಿದ ಮುನಿಶ್ರೇಷ್ಠರಾದ ಪತಂಜಲಿಯವರಿಗೆ ಕೈ ಮುಗಿದು ನಮಿಸುವೆನು

ಓಂ ಅಸತೋ ಮಾ ಸದ್ಗಮಯ,

ತಮಸೋ ಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ,

ಓಂ ಶಾಂತಿಃ ಶಾಂತಿಃ ಶಾಂತಿಃ

ಅರ್ಥ :- ಪರಮಾತ್ಮನೇ, ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಸಾವಿನಿಂದ ಅಮೃತತ್ವಕ್ಕೆ ನಮ್ಮನ್ನು ಕರೆದುಕೊಂಡು ಹೋಗು.

ಕರದರ್ಶನ ಮಂತ್ರ

ಕರಾಗ್ರೇ ವಸತೇ ಲಕ್ಷ್ಮೀ |

ಕರಮಧ್ಯೇ ಸರಸ್ವತೀ ||

ಕರಮೂಲೇ ಸ್ಥಿತಾ ಗೌರೀ |

ಪ್ರಭಾತೇ ಕರದರ್ಶನಮ್‌ ||

ಅರ್ಥ :- ಹಸ್ತದ ಕೊನೆಯಲ್ಲಿ ಲಕ್ಷ್ಮೀ, ಮಧ್ಯದಲ್ಲಿ ಸರಸ್ವತಿ, ಮೂಲದಲ್ಲಿ ಗೌರಿ ಇವರು ವಾಸಮಾಡುತ್ತಾರೆ. ಆದ್ದರಿಂದ ಪ್ರಾತಃ ಕಾಲದಲ್ಲಿ, ಹಸ್ತವನ್ನು ನೋಡಬೇಕು.

ಪ್ರಾಣಾಯಾಮ ಮಂತ್ರ

ಪ್ರಾಣಸ್ಯೇದಂ ವಶೇಸ್ಸರ್ವಂ |

ತ್ರಿದಿವೇಯತ್ ಪ್ರತಿಷ್ಠಿ ತಮ್‌ |

ಮಾತೇವ ಪುತ್ರಾನ್‌ ರಕ್ಷಸ್ವ |

ಶ್ರೀಶ್ಚ ಪ್ರಜ್ಞಾಂಶ್ಚ ವಿದೇಹಿನ ಇತಿಃ |

ಓಂ ಶಾಂತಿಃ ಶಾಂತಿಃ ಶಾಂತಿಃ ||

ಅರ್ಥ :- ಈ ಮೂರು ಲೋಕಗಳಲ್ಲಿ ಇರುವುದೆಲ್ಲವೂ ಪ್ರಾಣಕ್ಕೆ ವಶವಾಗಿದೆ, ಹೇ ಶಕ್ತಿಯೇ ನಮಗೆ ಸಂಪತ್ತನ್ನೂ, ಪ್ರಜ್ಞೆಯನ್ನೂ, ನೀಡಿ ತಾಯಿಯು ಮಕ್ಕಳನ್ನು ರಕ್ಷಿಸುವಂತೆ ನಮ್ಮೆಲ್ಲರನ್ನೂ ರಕ್ಷಿಸು.

ಈ ಬ್ಲಾಗ್ ಪೋಸ್ಟ್ ಬಗ್ಗೆ ನಿಮಗೆ ಏನಾದರೂ ಹೇಳಲು ಮತ್ತು ವಿಷಯ ಹಂಚಿಕೊಳ್ಳಲು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ವ್ಯಕ್ತಪಡಿಸಿ

You might also like to read blog post on …